• ಪ್ರತೀ ಸೋಮವಾರದಂದು ಆರೋಗ್ಯ ಮಾಹಿತಿಯನ್ನೊಳಗೊಂಡ ‘ಆರೋಗ್ಯ ಸಂದೇಶ’, ಪ್ರತೀ ಮಂಗಳವಾರದಂದು ‘ಕಲಾ ಸಂದೇಶ’, ಪ್ರತೀ ಬುಧವಾರದಂದು ‘ಯಶಸ್ಸಿನ ಸಂದೇಶ’, ಪ್ರತೀ ಗುರುವಾರದಂದು ‘ಹವ್ಯಾಸಗಳ ಸಂದೇಶ’, ಪ್ರತೀ ಶುಕ್ರವಾರದಂದು ಶೈಕ್ಷಣಿಕ ಮಾಹಿತಿಯನ್ನೊಳಗೊಂಡ ‘ಶಿಕ್ಷಣ ಸಂದೇಶ’ , ಪ್ರತೀ ಶನಿವಾರದಂದು ‘ಸ್ಪರ್ದಾತ್ಮಕ ಪರೀಕ್ಷಾ ತಯಾರಿಯ ಮಾಹಿತಿ’ ಪ್ರತೀ ಭಾನುವಾರದಂದು ಸಮಗ್ರ ಮತ್ತು ಸರ್ವತೋಮುಖ ಬೆಳೆವಣಿಗೆಗೆ ಪೂರಕವಾದ ಮೌಲ್ಯಾದರಿತ ಮಾಹಿತಿಯನ್ನು ಒಳಗೊಂಡ ‘ಜೀವನ ಸಂದೇಶ’ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಿದೆ.
  • ಈ ವಿಶೇಷ ಮಾಹಿತಿ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ 8 ಗಂಟೆಗೆ ಪ್ರಸಾರಗೊಳ್ಳಲಿವೆ.
  • ಹಾಗೆಯೇ ಈ ವಿಶೇಷ ಕಾರ್ಯಕ್ರಮಗಳು ಮರುದಿನ ಬೆಳಿಗ್ಗೆ 10 ಗಂಟೆಗೆ ಮರುಪ್ರಸಾರಗೊಳ್ಳಲಿವೆ.

 

ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಬಿತ್ತರಿಸಲಿದೆ. ಈ ಕಾರ್ಯಕ್ರಮಗಳು ನಮ್ಮ ಪ್ರತಿಷ್ಟಾನದ ವಿಧ್ಯಾರ್ಥಿಗಳ ಹಾಗೂ ಕರ್ನಾಟಕದ ಇನ್ನು ಬೆಳಕಿಗೆ ಬಾರದೇ ಅಡಗಿರುವ ವಿವಿಧ ಕಲಾ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಮಹತ್ತರ ಕೆಲಸದ ಪ್ರತೀಕವಾಗಿದೆ.

ಈ ಕಾರ್ಯಕ್ರಮಗಳು ಕರ್ನಾಟಕ ಪ್ರಾಂತೀಯ ಭಾಷೆಗಳಾದ ಕನ್ನಡ, ತುಳು, ಕೊಂಕಣಿಯಲ್ಲಿದ್ದು, ಸ್ಥಳಿಯ ಸಂಸ್ಕ್ರತಿಯನ್ನು ಪ್ರತಿಫಲಿಸುವ ಮತ್ತು ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಸಂಸ್ಕೃತಿಯ ಅಬಿರುಚಿಯನ್ನು ಜಾಗ್ರತಗೊಳಿಸುವ ದಿಶೆಯಲ್ಲಿ ಮಹತ್ತರ ಹೆಜ್ಜೆಯನ್ನಿಡುವ ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ 7 ಗಂಟೆಗೆ ಸಂದೇಶ ರೇಡಿಯೋದಲ್ಲಿ ಪ್ರಸಾರವಾಗಲಿದೆ.  ಹಾಗೂ ಇದರ ಮರುಪ್ರಸಾರವು ಮರುದಿನ ಬೆಳಿಗ್ಗೆ 9 ಗಂಟೆಗೆ  ನಡೆಯಲಿದೆ.

ಬನ್ನಿ ಮಿತ್ರರೇ, ನಮ್ಮ ಪ್ರತಿಭೆಗಳಿಗೆ ಸಹಕಾರ ನೀಡೋಣ ಮತ್ತು ಸೌಹಾರ್ದಯುತ ಸಮಾಜ ಕಟ್ಟೊಣಾ.

Comments powered by CComment

Home | About | News | Sitemap | Contact

Copyright ©2014 www.sandesha.org. Powered by eCreators

Contact Us

The Director
Sandesha Foundation For Culture and Education (R)
Premnagar , Bajjodi
Mangalore 575 005
Karnataka, INDIA
Tel : 0824- 2213278